ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ತಯಾರಿಸಲು ಹೆಣಗಾಡುತ್ತಿರುವಂತೆ ನಮ್ಮನೆಯಲ್ಲೂ ಪಟ್ಟಿಯ ಕುರಿತು ಗೊಂದಲ, ಆತಂಕ, ಅನುಮಾನ, ಸಮ್ಮತಿ, ಅಸಮ್ಮತಿಗಳೆಲ್ಲ ನಡೆಯುತ್ತಿದ್ದವು. ಪಕ್ಷಗಳ ಹೈ ಕಮಾಂಡಿನಂತೆಯೇ ನಮ್ಮನೆಯ ಏಕ ಸದಸ್ಯ ಹೈಕಮಾಂಡಿನ ಸರ್ವಸದಸ್ಯರು ತಲೆಯನ್ನು ಕೆರೆದು ಕೊರೆದೂ ತಯ್ಯಾರಿಸಿದ ಪಟ್ಟಿ ಕೊನೆಗೂ 36 ಗಂಟೆಗಳ ಬಳಿಕ ಅಂತಿಮವಾಗಿ ಓಕೆಯಾಯಿತು. ಪಟ್ಟಿಯನ್ನು ಏಕ ಸದಸ್ಯ ಹೈಕಮಾಂಡಿನ ಸರ್ವಸದಸ್ಯರು ಅಳೆದೂ ಸುರಿದೂ ಒಪ್ಪಿ ಕೊನೆಗೂ ನನ್ನ ಕೈಗೊಪ್ಪಿಸಿದರು.
ನಮ್ಮನೆಯ ಹೈಕಮಾಂಡ್ ಆಗಿರುವ ಅ(ತ್ತೆ)ಮ್ಮ ಸತತ ಮೂರು ದಿನಗಳ ಕಾಲ ತಲೆ ಕೆಡಿಸಿಕೊಂಡು ತಯಾರಿಸಿದ ಪಟ್ಟಿಯನ್ನು ಇಂದು ಬೆಳಗ್ಗೆ ನಾನು ಹೊರಟು ನಿಂತಾಗ ಸಾಮಾನಿನ ಮಾಮೂಲಿ ಚೀಲದೊಡನೆ ನನ್ನ ಕೈಯಲ್ಲಿಟ್ಟರು.
ಬಿಡಿಸಿ ನೋಡಿದೆ. ಅನ್ನದ ಕ್ಷೇತ್ರದಿಂದ ಅಕ್ಕಿಗೆ ಜಾಗವಿತ್ತು. ಇಂಗು ಒಮ್ಮೆ ಸ್ಥಾನ ಪಡೆದಿದ್ದರೂ, ಮತ್ತೆ ಕಳೆದುಕೊಂಡಿತ್ತು. ಸಾಂಬಾರ ಕ್ಷೇತ್ರದಿಂದ ಸಾಂಬಾರ್ ಪೌಡರ್ ಹಾಗೂ ರಸಂ ಪೌಡರ್ ಎರಡಕ್ಕೂ ಧಕ್ಕಿದೆ. ಚಹಾ-ಕಾಫಿ ಕ್ಷೇತ್ರದಲ್ಲಿ ಸಕ್ಕರೆ ಸ್ಥಾನ ಪಡೆದಿದ್ದರೆ, ಕಾಳುಗಳ ಕಡೆಯಿಂದ ಕಡ್ಲೆ, ತಿಂಗಳವರೆ, ರಾಜ್ಮಾಗಳು ಅವಕಾಶ ಪಡೆದುಕೊಂಡಿದ್ದವು. ಮಿಕ್ಕಂತೆ ಎಣ್ಣೆ, ಗೋಧಿ ಹುಡಿ, ಹಪ್ಪಳ, ಪಪ್ಪಡ, ಸೆಂಡಿಗೆ, ಮೆಣಸಿನ ಹುಡಿ ಇವುಗಳು ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದವು.
ವಿಷಯವಿಷ್ಟೆ. "ಮುಂದಿನವಾರ ನಾನು ಒಂದು ನಾಲ್ಕು ದಿನ ತವರಿಗೆ ಹೋಗುತ್ತಿದ್ದೇನೆ. ಏನಾದರೂ ಅಗತ್ಯ ವಸ್ತುಗಳು ಬೇಕಿದ್ದರೆ ಹೇಳಿ" ಎಂದಿದ್ದೆ ಅಮ್ಮನಿಗೆ. ಹಾಗಾಗಿ ಅವರು ತೀವ್ರವಾಗಿ ತಲೆಕೆಡಿಸಿಕೊಂಡು ಪಟ್ಟಿ ತಯ್ಯಾರಿಸಿದ್ದರು. "ಮೆಣಸು ಸ್ವಲ್ಪ ಇದೆ, ಬರಿಬೇಕೋ, ಬೇಡ ಕಾಣ್ತದೆ, ನಾಲ್ಕು ದಿನದಲ್ಲಿ ನೀನು ಬರ್ತಿಯಲ್ಲ" ಎನ್ನುತ್ತಾ ಪ್ರತಿಯೊಂದು ವಸ್ತುವನ್ನು ಬರೆದು - ಹೊಡೆದು - ಹರಿದು ಕುಳಿತಿದ್ದರು. ಏನೂ ಗಡಿಬಿಡಿ ಇಲ್ಲ ನಿಮಗೆ ನೆನಪಾದಂತೆಲ್ಲ ಬರೆಯುತ್ತಾ ಹೋಗಿ ಅಂತ ನಾನವರಿಗೆ 36 ಗಂಟೆಗಳ ಸಮಯಾವಕಾಶ ನೀಡಿದ್ದೆ.
ಬೈ ಡಿಫಾಲ್ಟ್ ಆಗಿ ಕ್ಷುಲ್ಲಕ ವಿಚಾರಗಳಿಗೆಲ್ಲ ಬೇಕೋ- ಬೇಡವೋ, ಅದೋ-ಇದೋ ಎಂದೆಲ್ಲ ತಲೆ ಕೆಡಿಸಿಕೊಳ್ಳುತ್ತಾ ಗೊಂದಲಕ್ಕೆ ಬೀಳುವ ಅವರು ಈ ಸಾಮಾನು ಪಟ್ಟಿ ಮಾಡುವ ವಿಚಾರದಲ್ಲೂ ತಲೆಕೆಡಿಸಿಕೊಳ್ಳುತ್ತಿರುವುದು ನನಗೆ ರಾಜಕೀಯ ಪಕ್ಷಗಳ ಅಭ್ಯರ್ಥಿ ಪಟ್ಟಿ ತಯ್ಯಾರಿಯಂತೆಯೇ ಕಂಡಿತ್ತು!
ಆಹಾ! ಈ ಪಟ್ಟಿಯಲ್ಲಿ ಬಂದಿರೋ ಅಭ್ಯರ್ಥಿಗಳನ್ನೆಲ್ಲ ನೀವು ನುಂಗಿ ನೀರು ಕುಡಿದು ಬಿಡುತ್ತೀರಲ್ಲಾ! ನಿಮಗೆ ಶಾನಿಯಾ ಗಾಂಧಿ ಅಂತ ಯಾಕೆ ಕರೆಯಬಾರದು?
ಪ್ರತ್ಯುತ್ತರಅಳಿಸಿಕಾಕಾ,
ಪ್ರತ್ಯುತ್ತರಅಳಿಸಿಎಷ್ಟು ಚೆನ್ನಾಗಿದೆ ನಿಮ್ಮ ಐಡಿಯಾ!!!
nijavaglu shaaniyavara nimma pattiyannu nodalike thumba kashta pattidene prajavani papernalli nimma ee blognabagge kottidannu nodi odide bahala chennagide
ಪ್ರತ್ಯುತ್ತರಅಳಿಸಿಸುಶ್ಮಿತಾ, ಶಾನಿಯ ಡೆಸ್ಕಿಗೆ ಬರಲು ನೀವು ಕಷ್ಟ ಪಟ್ಟಿದ್ದನ್ನು ನೋಡಿ ಸಂತಸದ ಸಂಕಟವಾಯಿತು. ಆಗಾಗ್ಗೆ ಬ್ಲಾಗ್ಗೆ ಬರ್ತಾ ಇರಿ! ಥ್ಯಾಂಕ್ಸ್!
ಅಳಿಸಿ