ಸೋಮವಾರ, ಫೆಬ್ರವರಿ 7

ನಮಗೇಕೆ ಜಡೆ ಇಲ್ಲ?

ಹಿಂದೆ ಯಾವಾಗಲೋ ಬರೆದಿದ್ದೆ, ಪ್ರಕಟವೂ ಆಗಿತ್ತು. ಮೊನ್ನೆ ಪುಸ್ತಕಗಳನ್ನು ಜೋಡಿಸಿಡುವಾಗ ಸಿಕ್ಕಿತ್ತು. ಇಲ್ಲಿಡುವಾ ಅಂತನ್ನಿಸಿತು.
ಜಡೆಗಳು
ಮೂರು ಜಡೆಗಳು
ಸೇರವು ಒಂದೆಡೆ
ಅದಕ್ಕೇ
ನಮಗಿಲ್ಲವೇ
ಇಲ್ಲ
ಜಡೆ!

ಏಡ್ಸ್
ಏಡ್ಸ್ ಬಾರದಿರಲು
ಏನು ಮಾಡಬೇಕು?
ಏನೂ
ಮಾಡದಿರಬೇಕು!

ಹಚ್-ಬಿಎಸ್ಸೆನ್ನೆಲ್
ನಾನಾಗಬೇಕಿದ್ದೆ
ಹೊದಲೆಲ್ಲ
ಹಿಂಬಾಲಿಸುವ
ಹಚ್;
ಅವನಾದ
ವ್ಯಾಪ್ತಿ ಪ್ರದೇಶಕ್ಕೆ
ಧಕ್ಕದ
ಬಿಎಸ್ಸೆನ್ನೆಲ್!

8 ಕಾಮೆಂಟ್‌ಗಳು:

 1. ಖುಶಿ ಕೊಡುವ ಹನಿಗವನಗಳು. ಕೊನೆಯದನ್ನು ಈಗಾಗಲೇ ಓದಿದ್ದೆ. ನೆನಪು ಮರುಕಳಿಸಿ ಸಂತಸವಾಯಿತು.

  ಪ್ರತ್ಯುತ್ತರಅಳಿಸಿ
 2. ಏನೇನೋ ಬರೀಬೇಡಿ. ರಾಜ್ಯಪಾಲರು ಡಾಕ್ಟರೇಟ್ ಕೊಡಲ್ಲ ಮತ್ತೆ!

  ಪ್ರತ್ಯುತ್ತರಅಳಿಸಿ
 3. ಏನಂದ್ರಿ ಭುವನ್?
  ನಾನು? ಡಾಕ್ಟರೇಟ್? ರಾಜ್ಯಪಾಲರು? ಒಳ್ಳೇ ಚೆನಾಗಿದೆ!

  ಪ್ರತ್ಯುತ್ತರಅಳಿಸಿ
 4. ಡಾಕ್ಟ್ರೇ...
  ಯಾವ ಥರನಾದ್ರೂ ಸೈ
  ನಿಮ್ಮ ಮೆಚ್ಚುಗೆಗೆ ನಮೋಃ ನಮಃ :-)

  ಪ್ರತ್ಯುತ್ತರಅಳಿಸಿ