ಕಾರ್ಯ ನಿಮಿತ್ತ
ಹೊರಟಿದ್ದೆ,
ಅಡ್ಡ ದಾಟಿದ್ದವು
ನಾಲ್ಕೈದು ಬೆಕ್ಕುಗಳು;
ಏನು ಕಾದಿದೆಯೋ,
ಗ್ರಹಚಾರ -
ಬೆಕ್ಕುಗಳಿಗೆ!
****
ಸತ್ತು
ಬದುಕಿದೆ!
ಛೇ, ಒಂದೊಮ್ಮೆ
ಪೂರಾ ಸತ್ತಿದ್ದರೇ....
ಎಷ್ಟೊಂದು
ಬದುಕು
ಮಿಸ್ಸಾಗೋಗ್ತಿತ್ತು!
****
ಬದುಕಲೇ
ಬೇಕಂತಿತ್ತು
ಜೀವ -
ಸತ್ತೇ
ಹೋದಂಗಿತ್ತು
ಭಾವ.....
****
ನಾ
ಬರೆದೆ;
ಬರಿದೆ-
ಎಲ್ಲಾ
ಬರಿದು!
ಹೊರಟಿದ್ದೆ,
ಅಡ್ಡ ದಾಟಿದ್ದವು
ನಾಲ್ಕೈದು ಬೆಕ್ಕುಗಳು;
ಏನು ಕಾದಿದೆಯೋ,
ಗ್ರಹಚಾರ -
ಬೆಕ್ಕುಗಳಿಗೆ!
****
ಸತ್ತು
ಬದುಕಿದೆ!
ಛೇ, ಒಂದೊಮ್ಮೆ
ಪೂರಾ ಸತ್ತಿದ್ದರೇ....
ಎಷ್ಟೊಂದು
ಬದುಕು
ಮಿಸ್ಸಾಗೋಗ್ತಿತ್ತು!
****
ಬದುಕಲೇ
ಬೇಕಂತಿತ್ತು
ಜೀವ -
ಸತ್ತೇ
ಹೋದಂಗಿತ್ತು
ಭಾವ.....
****
ನಾ
ಬರೆದೆ;
ಬರಿದೆ-
ಎಲ್ಲಾ
ಬರಿದು!
ಶಾನಿ,
ಪ್ರತ್ಯುತ್ತರಅಳಿಸಿಜೀವಕ್ಕೇನೊ ಗ್ರಹಚಾರ ಹಿಡಿಯಬಹುದು; ಭಾವಕ್ಕೂ ಗ್ರಹಚಾರವೆ?
ದಿನದಿನವೂ ತುಂಬಿರಿ ಒಂದೇ ಹನಿ,
ವಿನೋದದ-ಸಂತೋಷದ ಜೇನಹನಿ;
ಬದುಕು ಇದೀಗ ತುಂಬಿ ತುಳುಕುವ ಕೊಡ!