ಈಗೀಗ ನಾನೇ ಅಡುಗೆ ಮಾಡಿ ಅದನ್ನು ನಾನೇ ತಿನ್ನುವ ಸುಖಃ ಮತ್ತು ಕಷ್ಟಕ್ಕೆ ನನ್ನನ್ನು ಒಡ್ಡಿಕೊಂಡಿರುವುದರಿಂದ ಬ್ಲಾಗಿನಲ್ಲೊಂದು ರೆಸಿಪಿ ಬರೆಯಬೇಕೆಂದು ಬಹಳವಾಗಿ ಅನಿಸುತ್ತಿದ್ದು ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವಿದು.
ಹಾಗಾಗಿ ನಿಮಗೊಂದು ಯಮ್ಮೀಯಾಗಿರುವ 'ಮಡಿ ಉಪ್ಪಿಟ್ಟು' ಮಾಡುವ ವಿಧಾನ ಹೇಳೇಬಿಡುವ ಎಂದು ಹೊರಟಿದ್ದೇನೆ. ಮಡಿ ಉಪ್ಪಿಟ್ಟು ಎಂದರೆ ಈರುಳ್ಳಿ ಬೆಳ್ಳುಳ್ಳಿ ಹಾಕದೇ ಮಾಡುವ ರುಚಿರುಚಿ ಉಪ್ಪಿಟ್ಟು. ಹಾಗಾಗಿ ಇದು ವೃತ, ಉಪವಾಸ, ಒಪ್ಪತ್ತಿನವರಿಗೂ ಅನುಕೂಲವಾಗುತ್ತದೆ.
ಇಂಗು ತೆಂಗು ಇದ್ದರೆ ಮಂಗಮ್ಮನ ಅಡುಗೆಯೂ ಚಂದವಂತೆ. ನನ್ನ ಅಣ್ಣ ಮತ್ತು ಅಕ್ಕಗಳ ದಯೆಯಿಂದ ನನಗೆ ತೆಂಗು ಧಾರಾಳವಿದೆ. ಇಂಗು ಮಾತ್ರ ಖರೀದಿಸಿದರೆ ಆಯ್ತು. ಇಷ್ಟಾದರೂ ನನ್ನಡುಗೆಯ ಚಂದವೋ.....? ದೇವರಿಗೇ ಪ್ರೀತಿ; ಅದೇ ದೇವರಿಗೆ ನೈವೇದ್ಯವೇನಾದರೂ ಮಾಡಿದರೆ ಪಛೀತಿ!
ಈಗ ಉಪ್ಪಿಟ್ಟಿಗೆ ಬರೋಣ. ಇದನ್ನು ಮಾಡಲು ಬೇಕಾಗುವ ಸಾಮಾಗ್ರಿಗಳು ಕೆಳಗಿನಂತಿವೆ:
ಮೂಲ ಸಾಮಾಗ್ರಿಗಳು:
ಉಪ್ಪಿಟ್ಟು (ಚಿಕ್ಕ) ರವೆ, ಉಪ್ಪು. ಹಸಿಮೆಣಸು, ತೆಂಗಿನ ಕಾಯಿ ತುರಿ, ನೀರು ಮತ್ತು ಪಾತ್ರೆ ಹಾಗೂ ಸೌಟು.
ಒಗ್ಗರಣೆ ಸಾಮಾಗ್ರಿಗಳು:
ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡ್ಲೆಬೇಳೆ. ನೆಲಗಡಲೆ. ಕರಿ ಬೇವು ಮತ್ತು ಎಣ್ಣೆ.
ಹೆಚ್ಚುವರಿ ಸಾಮಾಗ್ರಿಗಳು:
ತುಪ್ಪ, ಗೋಡಂಬಿ, ಬೀನ್ಸ್, ಕ್ಯಾರೆಟ್, ಬಟಾಣಿ, ದೊಣ್ಣೆ ಮೆಣಸು, ಟೊಮ್ಯಾಟೋ, ನಿಂಬೆ ಹಣ್ಣು, ಕೊತ್ತಂಬರಿ ಸೊಪ್ಪು, ಸಕ್ಕರೆ ಇತ್ಯಾದಿ ಮತ್ತು ಅಕ್ಕನ ಮಗ. ಹಾಗೂ......, ಹೇಗೇ ಆದರೂ ಕೊಂಕು ಮಾತಾಡದೆ ತಿಂದು ಮುಗಿಸುವ ತಾಕತ್ತು ಇರುವ ಜನರು 3-5.
ಉಪ್ಪಿಟ್ಟು ಮಾಡುವ ವಿಧಾನ:
ಮೊದಲಿಗೆ ಅಕ್ಕನ ಮಗನನ್ನು ಕರೆದು (ಅವನು ಗೊಣದೇ ಇದ್ದರೆ) ಬೇಕಾದಷ್ಟು ತೆಂಗಿನ ಕಾಯಿ ತುರಿಯಲು ಹೇಳಬೇಕು. ಅಕ್ಕನ ಮಗನೇ ಆಗಬೇಕೆಂದಿಲ್ಲ, ಮಗಳೂ ಆಗಬಹುದು. ಸ್ವಂತ ಮಗ ಅಥವಾ ಮಗಳು, ಇಲ್ಲವೇ ಪತಿ ಯಾ ಪತ್ನಿ ಅಥವಾ ತೆಂಗಿನ ಕಾಯಿ ತುರಿಯಲು ಗೊತ್ತಿರುವ ಇತರ ಯಾರೂ ಆಗಬಹುದು. (ನನಗೆ ಸ್ವಂತದ ಗಂಡ-ಮಕ್ಕಳು ಇಲ್ಲದ ಕಾರಣ ನನ್ನ ಜೊತೆಗಿರುವ ಅಕ್ಕನ ಮಗನನ್ನು ಬಳಸಿಕೊಳ್ಳುತ್ತೇನೆ) - ಇವರು ಯಾರೂ ಆ ಸಮಯದಲ್ಲಿ ಲಭ್ಯವಿಲ್ಲವಾದರೇ ನೀವೇ ತುರಿದುಕೊಳ್ಳತಕ್ಕದ್ದು. ಬೇರೆಯವರು ತುರಿಯುವುದಾದಲ್ಲಿ ಒಂದಿಡಿ ತೆಂಗಿನ ಕಾಯಿಯೇ ತುರಿಯಲು ಹೇಳಿ. ಮಿಕ್ಕಿದರೆ ನಂತರದಲ್ಲಿ ಬೇರೆ ಇತರೇ ಪದಾರ್ಥಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ :-).
ಒಂದು ಅಳತೆ ರವೆಗೆ ನಾಲ್ಕು ಅಳತೆಯಷ್ಟು ನೀರನ್ನು ಒಂದು ಒಲೆಯಲ್ಲಿ ಕುದಿಯಲು ಬಿಡಬೇಕು. ಈ ನಡುವೆ, ಅವಸರವಿದ್ದರೆ ಮಧ್ಯದ ಚಿಕ್ಕ ಒಲೆಯಲ್ಲಿ ಕಾಫಿ ಅಥವಾ ಟೀ ಇಡಬಹುದು. ಪುರುಸೊತ್ತಿದ್ದರೆ (ಬೇಕಿದ್ದರೆ) ಕೊನೆಯಲ್ಲಿ ಮಾಡಿಕೊಂಡರೂ ಆಗುತ್ತದೆ. ಇನ್ನೊಂದು ಒಲೆಯಲ್ಲಿ ಅಗಲ ಬಾಯಿಯ ಪಾತ್ರೆ ತೆಗೆದುಕೊಂಡು ಒಂದಿಷ್ಟು ತುಪ್ಪ ಹನಿಸಿ ರವೆಯನ್ನು ಹುರಿಯಬೇಕು. ರವೆ ಕೆಂಪಗಾಗುತ್ತಲೆ ಅದನ್ನು ಒಂದು ತಟ್ಟೆಗೆ ಸುರಿದು ಪಕ್ಕಕ್ಕಿಡಿ. ಅಕ್ಕನ ಮಗಳ ಬಳಿ (ಇಲ್ಲಿಯೂ ತೆಂಗಿನಕಾಯಿ ತುರಿಯಲು ಬಳಸುವ ವ್ಯಕ್ತಿಯ ನಿಯಮವೇ ಅನ್ವಯವಾಗುತ್ತದೆ), ಟೊಮ್ಯಾಟೋ, ಹಸಿಮೆಣಸಿನ ಕಾಯಿ ಕತ್ತರಿಸಲು ಹೇಳಿ, ಆಕೆ ಕತ್ತರಿಸಿದವುಗಳನ್ನು ಅನುಕೂಲವಾದ ಕಡೆಯಲ್ಲಿ ಇರಿಸಿಕೊಳ್ಳಬೇಕು. ಕೈ, ಸೌಟು, ಪಾತ್ರೆ ಅಥವಾ ಇನ್ನೇನಾದರೂ ತಾಗಿ ಅಡುಗೆ ಮನೆ ಕಟ್ಟೆಯಿಂದ ಇದೆಲ್ಲ ಕೆಳಕ್ಕೆ ಬೀಳಬಾರದು. ಬಿದ್ದರೆ ಅದನ್ನು ಹೆಕ್ಕುವುದು ಮತ್ತೊಂದು ಕೆಲಸವಾಗುತ್ತದೆ.
ಬಣಲೆಗೆ ಅಥವಾ ನೀವು ಉಪ್ಪಿಟ್ಟು ಮಾಡುವ ಪಾತ್ರೆಗೆ ಎಣ್ಣೆ, ರುಚಿ ಪ್ರಿಯರಾಗಿದ್ದರೆ ತುಪ್ಪ (ತೂಕ ಕಳಕಳಿ ಇದ್ದರೆ ತುಪ್ಪ ಬಳಸುವುದು ಅಥವಾ ಬಿಡುವುದು ನಿಮಗೆ ಬಿಟ್ಟಿದ್ದು) ಸುರಿದು ಕಾದ ಮೇಲೆ ಸಾಸಿವೆ ಹಾಕಿ. ಅದು ಬಿಸಿ ತಾಳದೆ ಒದ್ದಾಡುತ್ತಾ ಚಡಪಡಿಸುವಾಗ ಜೀರಿಗೆ ಹಾಕಿ, ಜೀರಿಗೆಗಳು ಉಬ್ಬಿ ಎಣ್ಣೆಯ ಮೇಲೆ ತೇಲಲಾರಂಭಿಸಿದಾಗ ಉದ್ದಿನ ಬೇಳೆ ಹಾಕಿರಿ. ಅದು ಎಣ್ಣೆಯ ಕಾವಿಗೆ ನಾಚಿ ಕೆಂಪಾಗುವ ಹೊತ್ತಿಗೆ ಕಡ್ಲೆ ಬೇಳೆ ಹಾಕಿರಿ. ಕಡ್ಲೆಬೇಳೆಯನ್ನು ಕೋಪದಿಂದ ಕಪ್ಪಗಾಗಲು ಬಿಡಬಾರದು. ನೀವು ನೆಲಗಡಲೆ ಪ್ರಿಯರಾಗಿದ್ದರೆ ನೆಲಗಡಲೆ ಹಾಕಿ. (ಬಟಾಣಿ ಬಳಸುವುದಾದರೆ ನೆಲಗಡಲೇ ಬೇಕಾ? ಯೋಚಿಸಿ) ನೆಲಗಡಲೆ ಎಣ್ಣೆಯಲ್ಲಿ ಸೊಕ್ಕಿ ಅದು ಬಿರಿಯಲಾರಂಭಿಸುವಾಗ ಕರಿಬೇವು ಹಾಕಿರಿ. ಇದು ಘಮ್ಮೆನ್ನುವ ಪರಿಮಳ ಸೂಸುತ್ತಾ ಹಸಿರಾಗುತ್ತಾ ನಸುನಗುವಾಗ ಹಸಿ ಮೆಣಸು ಹಾಕಿ. ಘಾಟಿನಿಂದ ನಿಮ್ಮನ್ನು ಬೆದರಿಸುವಾಗ ಟೊಮ್ಯಾಟೋ, ದೊಣ್ಣೆ ಮೆಣಸು ಹಾಕಿ ಕೈಯಾಡಿಸಿ ಹಸಿಮೆಣಸಿನ ಘಾಟಿನ ಸೊಕ್ಕಡಗಿಸಿ. ಎಲ್ಲವೂ ಸರಿಯಾಯಿತೆನ್ನುವಾಗ, ಮೇಲೆ ತಿಳಿಸಿದ ಇತರೆ ತರಕಾರಿ, ಬಟಾಣಿ ಹಾಕುತ್ತೀರಾದರೆ ಅವುಗಳನ್ನು ಮೊದಲೆ ಸ್ವಲ್ಪ ಬೇಯಿಸಿಟ್ಟು ಇದಕ್ಕೆ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಹೊಂದಿಸಿ, ಅವೆಲ್ಲವುಗಳು ರಂಗುರಂಗಿನಿಂದ ಎಣ್ಣೆಯಲ್ಲಿ ಒಂದೇ ರಿದಂಗೆ ಒಗ್ಗಿ ಕುಣಿಯಲಾರಂಭಿಸುತ್ತವೆ. ಅಷ್ಟರಲ್ಲಿ ಇದಕ್ಕೆ ಕುದಿಯುವ ನೀರು ಬೆರೆಸಿ. ಉಪ್ಪು ಸೇರಿಸಿ. ಒಂದೆರಡು ಚಿಕ್ಕ ಚಮಚ ಸಕ್ಕರೆ ಸೇರಿಸಿ. ನಿಮ್ಮ ರುಚಿಗೆ ತಕ್ಕನಾದ ಹದದಲ್ಲಿ ತುರಿದ ತೆಂಗಿನಕಾಯಿ ಸೇರಿಸಿ.
ನೀರು ಚೆನ್ನಾಗಿ ಗುಳುಗುಳು ಕುದಿಯುತ್ತಾ ತೆಂಗಿನ ತುರಿಯ ರುಚಿ ಬಿಡುತ್ತಲೇ ಒಂದು ನಿಂಬೆ ಹಣ್ಣು ಕತ್ತರಿಸಿ ಹಿಂಡಿ, ಬೀಜ ತೆಗೆದು ಕುದಿಯವ ನೀರಿಗೆ ಸೇರಿಸಿ (ಉಪ್ಪಿಟ್ಟಿನ ಪ್ರಮಾಣಕ್ಕೆ ತಕ್ಕಂತೆ ನಿಂಬೆ ಹಣ್ಣನ್ನು ಹೆಚ್ಚಿಸುವ ಅಥವಾ ಕಡಿಮೆಗೊಳಿಸುವ ಹದವನ್ನು ನೀವೇ ಮೈಗೂಡಿಸಿಕೊಳ್ಳಬೇಕು- ಇದು ಇತರೆಲ್ಲ ಸಾಮಾಗ್ರಿಗಳಿಗೂ ಅನ್ವಯಿಸುತ್ತದೆ). ಇಷ್ಟಾದ ಮೇಲೆ, ಬೇಕಿದ್ದರೆ ಒಂದು ಚಿಕ್ಕ ತಟ್ಟೆಯಲ್ಲಿ ಸುರಿದು ಉಪ್ಪು ಕಾರ ಸರಿ ಇದೆಯೇ ಎಂದು 'ತಿಂದು ಅಥವಾ ಕುಡಿದು' ಪರೀಕ್ಷಿಸಬಹುದು. ಇದು ನಿಮಗೆ ಮತ್ತು ನಿಮ್ಮ ಆತ್ವವಿಶ್ವಾಸಕ್ಕೆ ಬಿಟ್ಟ ವಿಚಾರ. ಸರಿ ಇದೆ ಅನಿಸಿದರೆ ರವೆಯನ್ನು ಒಂದು ಬದಿಯಿಂದ ಹಾಕಿರಿ. ಇದು ನೀರಿನಲ್ಲಿ ಚೆನ್ನಾಗಿ ಬೆರೆತು ಹೊಂದಿಕೊಳ್ಳುವಂತೆ ಕೂಡಕೂಡಲೇ ತಿರುಗಿಸಬೇಕು. ಉಪ್ಪಿಟ್ಟಿನ ಹದಕ್ಕೆ ಗಟ್ಟಿಯಾಗುತ್ತಲೆ ಚಿಕ್ಕದಾಗಿ ಕತ್ತರಿಸಿಟ್ಟ ಹಸಿರಾಗಿರುವ ಕೊತ್ತಂಬರಿ ಸೊಪ್ಪು ಸೇರಿಸಿ ತಿರುವಿ ಒಲೆ ಆರಿಸಿ ಮುಚ್ಚಿಡಿ. ಉಪ್ಪಿಟ್ಟು ತೀರಾ ಗಟ್ಟಿಯಾಗಬಾರದು ಮತ್ತು ತೀರಾ ನೀರಾಗಬಾರದು. ಹದವಾಗಿ ಮೆತ್ತಗಾಗಿದ್ದರೇ ಅದರ ಸವಿ ಬೇರೆಯದೇ ಆಗಿರುತ್ತದೆ. ಬಲ್ಲವನೇ ಬಲ್ಲ ಉಪ್ಪಿಟ್ಟಿನ ರುಚಿ!
ಸ್ವಲ್ಪ ತಣ್ಣಗಾದ ಬಳಿಕ, ಬಟ್ ಬಿಸಿ ಆರುವ ಮುನ್ನವೇ, ನಿಮ್ಮ ಮೇಲೆ ನಂಬಿಕೆ ಇರುವ ಅಥವಾ ಇಲ್ಲದಿದ್ದರೂ ಪರ್ವಾಗಿಲ್ಲ; ಒಟ್ಟಿನಲ್ಲಿ ತಿನ್ನಲು ಸಿದ್ಧವಿರಬೇಕು, ಅಂತಹವರಿಗೆ (ಮೇಲೆ ಹೇಳಿದ ತಿನ್ನಲು ಬೇಕಿರುವ ಜನರಿಗೆ) ಬಡಿಸಿರಿ. ಅವರೇನಾದರೂ ಕಾರ, ಉಪ್ಪು ಎಂದೆಲ್ಲ ದೂರಿದರೆ ಸ್ವಲ್ಪ ಸಕ್ಕರೆಯೋ, ತುಪ್ಪವೋ, ತೆಂಗಿನ ತುರಿಯೋ ಬೇಕಾಗಿರುವುದನ್ನು ಬಡಿಸಿ ಬಾಯಿ ಮುಚ್ಚಿಸಲು ಪ್ರಯತ್ನಿಸಬಹುದು. ಬದಿಯಲ್ಲಿ ಕುಡಿಯಲು ಬೇಕಿದ್ದರೆ ನೀರೋ ಅಥವಾ ಚಹವೋ, ಕಾಫಿಯೋ, ಗ್ರೀನ್ ಟೀಯೋ, ಬ್ಲಾಕ್ ಟೀಯೋ, ಇಲ್ಲ ಬೇರೇನಾದರೋ- ಅವರವರ ಅಭ್ಯಾಸಕ್ಕೆ - ಬೇಡಿಕೆಗೆ ತಕ್ಕಂತೆ ನೀಡಬಹುದು. ಉಪ್ಪಿಟ್ಟು ಬಡಿಸುವಾಗ ಅಥವಾ ಪ್ರಸ್ತುತ ಪಡಿಸುವಾಗ ನಿಮಗೆ ಹೇಗೆ ಬೇಕೋ ಹಾಗೆ, ಉಪ್ಪಿಟ್ಟಿನ ಮೂಲ ರುಚಿಗೆ ಧಕ್ಕೆಯಾಗದಂತೆ ಅಲಂಕರಿಸಬಹುದು.
ಇವರೆಲ್ಲರೂ ತಿಂದು ಕುಡಿದು ಅರ್ಧಗಂಟೆ ಕಳೆದ ಬಳಿಕ ಎಲ್ಲರೂ ಚೆನ್ನಾಗಿದ್ದರೆ, ಯಾರೂ ಹೊಟ್ಟೆ ನೀವಿಕೊಳ್ಳದೇ ಇದ್ದರೆ ನೀವು ತಿನ್ನಲು ಪ್ರಯತ್ನಿಸಬಹುದು!
ನಾನು ಹೇಳಿದ ಶೈಲಿ ನಿಮಗೆ ಒಗ್ಗಲಿಲ್ಲವೆಂದಾದರೆ, ನೀವು ಟಿವಿ ವಾಹಿನಿಗಳ ಹೊಸರುಚಿ ತೋರುವ - ಹೇಳುವ ಶೈಲಿಗೆ ಮಾರು ಹೋಗಿದ್ದೀರೆಂದಾದರೆ, ಒಗ್ಗರಣೆ ಡಬ್ಬಿಯ ಮುರಳಿಯೋ, ಸವಿರುಚಿಯ ಇನ್ನೊಬ್ಬರೋ, ಬಪ್ಪರೆ ಭೋಜನದ ಮತ್ತೊಬ್ಬರೋ, ಇಲ್ಲವೇ ನಿಮಗಿಷ್ಟವಾದ ವಾಹಿನಿಯ ಇತರ ಆ್ಯಂಕರ್‌ಗಳು ಹೇಳುವ "ನೋಡ್ಕೊಳಿ, ಮಾಡ್ಕೊಳಿ, ತಿಂದ್ಕೊಳಿ; ಅಥವಾ ಬೇರೆ ರೀತಿಯಲ್ಲಿ; ಇಲ್ಲವಾದರೆ ಎಲ್ಲರೂ ಹೇಳುವುದನ್ನೆಲ್ಲ ಬಳಸಿದ ಹೊಸದೊಂದು ನಮೂನೆಯ ಮಿಶ್ರ ರೀತಿಯಲ್ಲಿ" - ಹೇಗೆ ಬೇಕೋ ಹಾಗೆಯೇ ಹೇಳಿದ್ದೇನೆಂದು ದಯವಿಟ್ಟು ಊಹಿಸಿಕೊಳ್ಳಿ, ಕಲ್ಪಿಸಿಕೊಳ್ಳಿ - ಮಡಿ ಉಪ್ಪಿಟ್ಟು ಮಾಡಿಕೊಳ್ಳಿ - ತಿಂದುಕೊಳ್ಳಿ - ಹೇಗಿತ್ತೆಂದು ನನ್ನೊಡನೆ ಹೇಳಿಕೊಳ್ಳಿ!
(ವಿ.ಸೂ.: ನಾನು ಇಂದು ಬೆಳಗ್ಗೆ ಈ ಉಪ್ಪಿಟ್ಟು ಮಾಡಿ ಬಡಿಸಿ ತಿಂದು ಇನ್ನೂ ಚೆನ್ನಾಗೇ ಇದ್ದೇನೆ. ಮತ್ತು ನನ್ನೊಡನೆ ಇದನ್ನು ಸವಿದ ಅಕ್ಕನ ಮಗ ಮತ್ತು ಮಗಳಿಬ್ಬರೂ ಮನೆಗೆ ಹೋಗಿ ಬರುತ್ತೇವೆಂದು ಹೊರಟು ನಿಂತಿಲ್ಲ)

(ಚಿತ್ರ ದೇವರಾಣೆಗೂ ಸ್ವಂತದ್ದಲ್ಲ, ಸಿಕ್ಕಲ್ಲಿಂದ ತೆಗೆದದ್ದು)

ಅಹಾ, ಶಾನಿ, ನೀವು ಹೇಳಿದ, ‘ಮಡಿ ಉಪ್ಪಿಟ್ಟು’ ಬಾಯಲ್ಲಿ ನೀರೂರಿಸುತ್ತಿದೆ. ತುರಿಯಲು ಒಂದು ತೆಂಗಿನಕಾಯಿ ಹಿಡಿದುಕೊಂಡು ನಿಮ್ಮ ಮನೆಗೇ ಬರುತ್ತೇನೆ. ಅಲ್ಲಿ ‘ಮಾಡಿಕೊಂಡು, ತಿಂದುಕೊಳ್ಳೋಣವೆ?’
ಪ್ರತ್ಯುತ್ತರಅಳಿಸಿಖಂಡಿತಾ ಅಂಕಲ್!
ಅಳಿಸಿಸದ್ಯ ನಿಮಗೆ ಉಪ್ಪಿಟ್ಟು ಮಿಸ್ ಆಗೋಯ್ತಾ ಅಂತ ಸ್ವಲ್ಪ ತಳಮಳ ಆಗಿತ್ತು. ಈಗ ನೀವು ಒಂದು ತೆಂಗಿನಕಾಯಿ ಸಮೇತ ಸ್ಫೂರ್ತಿಗೊಂಡಿದ್ದು ನೋಡಿ ಸಮಾಧಾನ!