ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ......... ನಾನು ಅಪಹರಣಕ್ಕೀಡಾಗಿದ್ದೇನೆ ಎಂದು ತಿಳ್ಕೊಂಡಿದ್ದ. ಹಾಗಾಗಿ ಬ್ಲಾಗ್ಲೋಕಕ್ಕೆ ಭೇಟಿ ನೀಡಲು ಆಗಲೇಇಲ್ಲ. ನಿನ್ನೆ ನನ್ನ ಸ್ನೇಹಿತೆ, ಅಪಹರಣವೂ ಇಲ್ಲ ಮಣ್ಣಾಂಗಟ್ಟಿಯೂ ಇಲ್ಲ, ಗುಂಡುಕಲ್ಲಿನ ಹಾಗಿದ್ದೀಯಾ ಸೋಂಬೇರಿ ಎಂದೊಂದು ಒದ್ದಾಗ ಭ್ರಮೆಯಿಂದ ಹೊರಬಿದ್ದೆ. ನನ್ನ ಈ ಹಿಂದಿನ ಪೋಸ್ಟ್‌ಗೆ ನಿಮ್ಮೆಲ್ಲರ ಪ್ರೀತಿಯ ಕಮೆಂಟಿಗೆ ಪ್ರತಿಕ್ರಿಯಿಸದಷ್ಟು ಸೂಕ್ಕು ಅಂತ ಮಾತ್ರ ತಿಳ್ಕೋಬೇಡಿ. ಪ್ಲೀಸ್.
ಸಹ ಬ್ಲಾಗಿಗರಾಗಿರುವ ಸುನಾಥ ಅವರು ಹೀಗೆ ಕಮೆಂಟಿದ್ದರು. "ಹೋಗೀ ಹೋಗೀ ಆ ಅನ್ವೇಷಿಗಳ ಕಡೆಯಿಂದ ಕಲ್ತುಕೊಂಡಿರೇನ್ರಿ?ಅಂದ ಮ್ಯಾಲ, ನೀವು ಎಷ್ಟು ಖರೇ ಬರೀತೀರಿ ತಿಳಧಂಗಾತು. (ನನಗೂ ಅವರೇ ಗುರುಗಳು)"
ಯಾಕ್ರೀ ಸುನಾಥರೇ, ಹೋಗೀ ಹೋಗಿ ಆ ಆನ್ವೇಷಿಗಳ ಕಡೆಯಿಂದ ಕಲ್ತುಕೊಂಡ್ರಾ ಅಂತ ಕೇಳ್ತೀರಾ? ಅವರು ಎಷ್ಟು ದೋಡ್ಡ ಅಜ್ಞಾನಿಗಳು ಅಂತ ಗೊತ್ತೇನ್ರಿ? 'ಬೋರು ಹೊಡೆಸದ ಬೋರ' ಎಂಬ ಬಿದಿರನ್ನು ಅವರಿಗೆ ನೀಡಬೇಕು ಎಂಬುಗಾಗಿ ಅವರ ಅಭಿನಾಮಿಗಳ ಏಕ ಸದಸ್ಯಾ ಸಂಘದ ಸರ್ವ ಸದಸ್ಯರೂ ನಿರ್ನಾಮ ಮಾಡಿದ್ದೇವೆ. ನಿಮಗೂ ಅವರೇ ಗುರುಗಳು ಅಂದ ಮೇಲೆ ನೀವೂ ಬುರುಡೆ ಮಾಸ್ಟ್ರೇ ಇರಬೇಕು. ಏನಂತೀರಿ?
ಆಮೆಲೆ ನನ್ನ ಪ್ರಥಮ ಬ್ಲಾಗೆಳತಿ ನೀಲಗಿರಿಯವರು, ಹೀಗಂದಿದ್ದರು. "1000 ಹಿಟ್ಟು ತಿಂದಿದ್ದಕ್ಕೆ ಅಭಿನಂದನೆಗಳು ಶಾನಿಯವರೇ. ನಾನೂ ದಟ್ಸ್ ಕನ್ನಡದಿಂದ ನಿಮ್ಮ ಬ್ಲಾಗು ಹುಡುಕಿದವಳೇ! ಆದರೆ ನಿಮ್ಮ ಗುರುಗಳು ಅನ್ವೇಷಿಗಳು ಅಂತ ಇವತ್ತೇ ಗೊತ್ತಾಗಿದ್ದು. ನನಗೂ ಬ್ಲಾಗಿಗರ ಪರಿಚಯವಾದದ್ದು ಬೊ-ರ ದಿಂದಲೇ. ಆದರೆ ಗುರುಗಳು ಮಾತ್ರ 3ಶ್ರೀಗಳು :)"
ನೀಲಗಿರಿಯವರೇ ನಿಮಗೊಂದು ಗುಟ್ಟು ಗೊತ್ತಾ? ನೀವೇ ನನ್ನ ಮೊದಲ ಬ್ಲಾಗೆಳತಿ! ನನ್ನ ಗುರುಗಳು ಅನ್ವೇಷಿಗಳು ಅಂತ ಹೇಳಿಕೊಳ್ಳಲು ನಂಗಂತೂ ಹೆಮ್ಮೆ. ಆದರೆ ನಾನವರಿಗೆ ಎಮ್ಮೆಯೋ ಗೊತ್ತಿಲ್ಲ :)
ಇನ್ನು ನನ್ನ ಮೇಸ್ಟ್ರು ಅಸತ್ಯ ಅನ್ವೇಷಿಯವರ ಪ್ರತಿಕ್ರಿಯೆ ಈ ಕೆಳಗಿನಂತಿತ್ತು.(ಅವಮಾನ ನಷ್ಟ ಕ್ಲೇಮು ಮಾಡಲು ಎಲ್ಲಿ ಅವಕಾಶ ಸಿಗುತ್ತೆ ಅಂತ ಕಾಯ್ತಾ ಕೂತಿರೋವಾಗ ನಿಮ್ಮ ಈ ಪೋಸ್ಟ್ ಸಿಕ್ಕಿತು.
ನೀವು ಹೀಗೆಲ್ಲಾ ಸುಖಾಸುಮ್ಮನೆ ನಮಗೆ ಕ್ರೆಡಿಟ್ಟು ಕಾರ್ಡು ಕೊಟ್ಟು ಕಳುಹಿಸುವುದು ನೋಡುತ್ತಿದ್ದರೆ, ಚೆನ್ನಾಗಿಯೇ ನಿದ್ದೆ ಮಾಡುತ್ತಿರುವ ನಮ್ಮ ನಿದ್ದೆಗೆಡಿಸಲು ಈ ಕ್ರೆಡಿಟ್ಟುಕಾರ್ಡಿನ ಸಾಲವನ್ನೇ ಬಳಸುತ್ತೀರೆಂಬುದು ಪತ್ತೆಯಾಗಿದೆ.
ಹೀಗಾಗಿ ಖಂಡಿತಾ ನಮ್ಮ ಕ್ರೆಡಿಟ್ಟುಕಾರ್ಡು ಸಾಲ ತೀರಿಸುವ ನಿಟ್ಟಿನಲ್ಲಿ ನಮಗೆ ಈ ಅವಮಾನ ನಷ್ಟ ಮೊಕದ್ದಮೆ ಪೂರಕವಾಗುತ್ತದೆ. ಎಷ್ಟು ಬೇಕಾದರೂ ಅವಮಾನ ನಷ್ಟ ಮಾಡಿಕೊಳ್ಳಲು ಸಿದ್ಧ. ಆದರೆ ಕ್ರೆಡಿಟ್ ಕಾರ್ಡು ಸಾಲ ಮಾತ್ರ ತೀರಲೇ ಬೇಕು...)
ಅಲ್ಲ ಗುರುಗಳೇ,ನಾವೆಲ್ಲ ನಿದ್ದೆ ಬರದೇ ಹೊರಳಾಡುತ್ತಾ, ಮಂಚದಿಂದ ಉರುಳುರುಳಿ ಬೀಳುತ್ತಿರುವಾಗ, ನೀವು ಗಡದ್ದಾಗಿ ನಿದ್ದೆ ಹೊಡೆದರೆ ನಮ್ಮ ಹೊಟ್ಟೆ ಉರಿಯದಿರುತ್ತಾ? ಅದಕ್ಕೆ ಕ್ರೆಡಿಟ್ಟು ಕಾರ್ಡು ಸಾಲ. ನಿಮ್ಮ ಅವಮಾನ ನಷ್ಟಭರ್ತಿ ಮಾಡಲೂ ನೀವು ನಿಮ್ಮ ಕ್ರೆಡಿಟ್ ಕಾರ್ಡನ್ನೇ ನಮಗೆ ಧಾರೆ ಎರೆಯುತ್ತೀರೆಂದು ತಿಳಿದು ಸಂತೋಷಗೊಂಡಿದ್ದೇವೆ.
ಯಾವಾಗಲೂ ಪ್ರೋತ್ಸಾಹ ನೀಡುವ ಪ್ರಶಾಂತ್ ಏನಾದರೂ ಕಾರಣ ಹುಡುಕಿ ನಿಮ್ಮ ಬ್ಲಾಗ್ಮನೆಗೆ ಬರುವಂತೆ ಮಾಡ್ತೀರಾ ಅಂದಿದ್ರು. ಏನ್ಮಾಡ್ಲೀರೀ... ಏನಾದರೂ ಮಾಡುತಿರು ತ(ತಿ)ಮ್ಮಾ ಅಂತ ತಿಳಿದೋರು ಹೇಳಿದ್ದಾರಂತೆ. ಹಾಗಾಗಿ ಬರೆಯುತ್ತಾ ಇರಬೇಕು ಎಂಬ ತುಡಿತ. ಆದರೆ, ನಾವು ಬಯಸಿದಂಗೆ ಸಮಯ ಸಂದರ್ಭಗಳು ಒದಗಿ ಬರುತ್ತಿಲ್ಲ. ಮಧ್ಯೆ ಒಂದಿಷ್ಟು ಉದಾಶೀನದ ಮಿಳಿತ. ಹೀಗೆ ನಿಮ್ಗೆಲ್ಲಾ ಮತ್ತೆ ಮಿಕ್ಕೆಲ್ಲ ಭೇಟಿಗರಿಗೆ ಥ್ಯಾಂಕ್ಸ್ ಹೇಳಿ ಹೋಗೋಣ ಅಂತ ಬಂದೆ. ಹಲ್ಲುನೋವಿನ ಕಥೆ ಹೇಳ್ಕೋಬೇಕು. ಸದ್ಯವೇ ಸಿಗೋಣ.
ಇನ್ನೊಂದು ವಿಷ್ಯಾ, ಮತ್ತೊಮ್ಮೆ ಇಲ್ಲಿ ದಟ್ಸ್ ಕನ್ನಡ ಪ್ರಸ್ತಾಪಿಸಬೇಕು. ದಟ್ಸ್ ಕನ್ನಡದವರು ನನ್ನ ಬ್ಲಾಗಿನ ಕೊಂಡಿಯನ್ನು ವನ್ ಇಂಡಿಯಾ ಬ್ಲಾಗುಗಳ ಪಟ್ಟಿಗೆ ಸೇರಿಸಿದ್ದಾರೆ. ಹಾಗಾಗಿ ಈಗ ಅಲ್ಲಿಂದಲೂ ವಿಸಿಟಿಗರು ಬರುತ್ತಿದ್ದಾರೆ. ಅವ್ರಿಗೂ ನಾನು ಆಭಾರಿ.
ಶುಕ್ರವಾರ, ಜುಲೈ 11
ನಾನು ಕಿಡ್ನಾಪ್ ಆಗಿಲ್ವಂತೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ